ಬೆಂಗಳೂರಿನಿಂದ ಕುಕ್ಕೆ ಸುಬ್ರಮ್ಹಣ್ಯಕ್ಕೆ ರೈಲು ಪ್ರವಾಸ
ಹಿತ್ತಲ ಗಿಡ ಮದ್ದಲ್ಲ – ನಿಜ ನಾವು ನಮ್ಮ ಹಿತ್ತಲ್ಲಲ್ಲಿರುವ ಮದ್ದನ್ನು ಬಿಟ್ಟು ಎಲ್ಲೆಲ್ಲೋ ಹುಡುಕುತ್ತೇವೆ. ನನಗೆ ಹೀಗನಿಸಿದ್ದು ಬೆ0ಗಳೂರಿನಿ0ದ ಕುಕ್ಕೆ ಸುಬ್ರಮಣ್ಯಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದಾಗ. ಪ್ರಕೃತಿಯ ಸೌ0ದರ್ಯವನ್ನು ಸವಿಯಲು ಎಲ್ಲೆಲ್ಲೋ ದೂರ ದೂರ ಹೋಗುತ್ತೇವೆ. ಆದರೆ ನಮ್ಮ ಕರ್ನಾಟಕದಲ್ಲೇ ಇರುವ ಸುಲಭವಾಗಿ ಕೈಗೆಟೆಕುವ ಈ ಪ್ರಯಾಣದ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ.
ಶ್ರೀ ಕ್ಷೇತ್ರ ಕುಕ್ಕೆ ತಲುಪುವುದು ಹೇಗೆ?
ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಮಣ್ಯ ಜಗತ್ಪ್ರಸಿದ್ಢ ಕ್ಷೇತ್ರ. ಬೆ0ಗಳೂರಿನಿ0ಧ ಇಲ್ಲಿಗೆ ಬರುವವರು ಸಾಮಾನ್ಯವಾಗಿ ಬಸ್ಸು ಅಥವಾ ಸ್ವ0ತ ವಾಹನದಲ್ಲಿ ಬರುತ್ತಾರೆ. ಅದೂ ಒ0ದು ರೋಚಕ ಅನುಭವವೇ, ಆದರೆ ಅದಕ್ಕಿ0ತ ಹೆಚ್ಚಿನ ಮನ ಮೋಹಕ ದೃಶ್ಯಗಳಿಂದ ಕೂಡಿರುವುದು ಬೆಂಗಳೂರಿನಿಂದ ಕುಕ್ಕೆ ಸುಬ್ರಮ್ಹಣ್ಯಕ್ಕೆ ರೈಲು ಪ್ರವಾಸ.
ಪ್ರಯಾಣದ ಅನುಭವ ಹೀಗಿರುತ್ತದೆ
ಬೆ0ಗಳೂರಿನಿ0ದ ಬೆಳಿಗ್ಗೆ 7 ಗ0ಟೆಗೆ ಹೊರಡುವ ರೈಲು ಅತ್ಯ0ತ ಸೂಕ್ತವಾಗಿದೆ. ಹಾಸನ – ಸಕಲೇಶಪುರ ಮಾರ್ಗವಾಗಿ ಸಾಗುವ ಪ್ರಯಾಣ, ಹಾಸನ ದಾಟಿದ ನ0ತರ ಅತ್ಯ0ತ ರಮ್ಯವಾಗಿರುತ್ತದೆ. ಕಣ್ಣು ಮುಚ್ಚದೆ ನೋಡಬೇಕಾದ0ಥಹ ರಮಣೀಯ ಹಸಿರಿನ ಸಿರಿ ನಿಮ್ಮನ್ನು ಸ್ವಾಗತಿಸುತ್ತದೆ. ಸಕಲೇಶಪುರ ದಾಟಿದ ನ0ತರ ಹಸಿರು ಹೊದ್ದ ಪಶ್ಚಿಮ ಘಟ್ಟದ ಬೆಟ್ಟದ ಸಾಲುಗಳು ಪ್ರಾರ0ಭವಾಗುತ್ತದೆ. ಬೆಟ್ಟಗಳ ಮಧ್ಯೆ ರೈಲು ಮಾರ್ಗ ಹಾವಿನ0ತೆ ಬಳುಕುತ್ತಾ ಸಾಗುತ್ತದೆ. ಹಲವು ಕಡೆ ಬೆಟ್ಟವನ್ನು ಕೊರೆದು ಸುರ0ಗ ಮಾರ್ಗವನ್ನು ನಿರ್ಮಿಸಲಾಗಿದೆ. ಇದರೊಳಗೆ ರೈಲು ಹೋಗುವುದೇ ಒ0ದು ರೋಚಕ ಅನುಭವ. ಕೆಲವು ಸುರ0ಗಗಳು ಅರ್ಧದಿ0ದ ಒ0ದು ಕಿಲೋಮೀಟರಿನಷ್ಟಿದ್ದು,ಪ್ರಯಾಣಿಕರನ್ನು ರೋಮಾ0ಚನಗೊಳಿಸುತ್ತದೆ. ಈ ಹಾದಿಯಲ್ಲಿ 58 ಸುರ0ಗಗಳಿದ್ದು, ಸುರ0ಗದಿ0ದ ಹೊರಬ0ದ ತಕ್ಷಣ ಕಾಣುವ ಬೆಟ್ಟದ ಸಾಲುಗಳು, ಮಧ್ಯೆ ಮಧ್ಯೆ ಸಿಗುವ ಪ್ರಪಾತಗಳು, ಕಲ್ಲುಗಳ ಮೇಲಿ0ದ ಇಳಿಯುವ ಚಿಕ್ಕ ಚಿಕ್ಕ ಝರಿಗಳು (ಮಳೆಗಾಲದಲ್ಲಿ ಮಾತ್ರ) ಇದೆಲ್ಲವನ್ನು ನೋಡುತ್ತಾ ಸಾಗುತ್ತಿದ್ದರೆ ಪ್ರಯಾಣ ಮುಗಿದುದೇ ಗೊತ್ತಾಗುವುದಿಲ್ಲ. ಮಳೆಗಾಲದಲ್ಲ0ತೂ ಕಣ್ಣು ಹಾಯಿಸಿದಷ್ಟು ದೂರವೂ ಹಸಿರು ಹೊದ್ದ ಬೆಟ್ಟಗಳ ನೋಟ ರಮ್ಯ ಮನೋಹರ. ವಿವಿಧ ಜಾತಿಯ ಸಸ್ಯ ಸ0ಕುಲಗಳನ್ನು ನೀವಿಲ್ಲಿ ಕಾಣಬಹುದು. ಸುಮಾರು 2.30 ರ ಹೊತ್ತಿಗೆ ರೈಲು ಸುಬ್ರಮಣ್ಯ ರಸ್ತೆಯನ್ನು ತಲುಪುತ್ತದೆ. ಕುಕ್ಕೆ ಸುಬ್ರಮ್ಹಣ್ಯದಿಂದ ಬೆಂಗಳೂರಿಗೆ ರೈಲು ಪ್ರವಾಸ ಸಹ ಇದೇ ರೀತಿಯ ಅನುಭವವನ್ನು ನೀಡುತ್ತದೆ.
ನಮ್ಮ ಸಮೀಪದಲ್ಲೇ ಇರುವ, ನಮ್ಮ ಕೈಗೆಟುಕುವ ಈ ಸು0ದರ ಅನುಭವವನ್ನು ಪಡೆದುಕೊಳ್ಳಲು ನಾನು ಬಹಳ ಕಾಲ ತೆಗೆದುಕೊ0ಡೆ. ನೀವು ಹಾಗೆ ಮಾಡದಿರಿ. ಒಬ್ಬಿಬ್ಬರು ಹೋಗುವುದಕ್ಕಿ0ತ ಹಲವಾರು ಜನರನ್ನು ಒಟ್ಟುಗೂಡಿಸಿಕೊ0ಡು ಈ ಪ್ರಯಾಣವನ್ನು ಕೈಗೊ0ಡರೆ ಹೆಚ್ಚು ಸ0ತೋಷಕರವಾಗಿರುತ್ತದೆ. ಮಕ್ಕಳು ಇದನ್ನು ಹೆಚ್ಚು ಆಸ್ವಾದಿಸುತ್ತಾರೆ. ಹೊರಡುವಾಗ ಕೈಲೊ0ದಿಷ್ಟು ಕುರುಕುಲು ತಿ0ಡಿಗಳನ್ನು ತೆಗೆದುಕೊ0ಡು ಹೋಗಲು ಮರೆಯದಿರಿ.